Monday, October 5, 2009

ಮದ್ಯಂತರ

ಹೌದು! ೪೦ ವಾರಗಳ ಈ ಒಂದು ಸುದೀರ್ಗ ಸುಮದುರ ಪ್ರಾಜೆಕ್ಟ್ ನಲ್ಲಿ ಈಗ ಹಾಫ್ ಟೈಮ್ , ಇದು ಇಪತ್ತನೆ ವಾರ. ಈ ತನಕ ಸುಮಾರು ಬದಲಾವಣೆಗಳು ಆಗಿವೆ. ಇದೀಗ ನಾವು ಸೀಮಂಥದ ಬಗ್ಗೆ ಯೋಚನೆ ಮಾಡುತ್ತ ಇದ್ದೇವೆ. ಈ ಮೊದಲು ಜನವರಿ ಇಂದ ಇವಳು ಮಂಗಳೂರಿನ ನಮ್ಮ ಮನೆಯಲ್ಲಿ ಇದ್ದು, ಮನೆಯಿಂದ ಒಂದು ತಿಂಗಳು ಕೆಲಸ ಮಾಡುವುದೆಂದು ನಿರ್ದರಿಸಿದ್ದೆವು. ಆದರೆ ಒಂದೆರಡು ವಾರದೀಚೆಗೆ ಇದು ಅಷ್ಟೊಂದು ಉತ್ತಮ ಅಲ್ಲವೆಂದು, ಇಲ್ಲಿ ಬೆಂಗಳೂರಿನಲ್ಲೇ ಡೆಲಿವರಿ ಮಾಡಿಸ್ಕೊಂಡ ನಂತರ ಇವಳು ಮನಗೆ ಹೋಗುವುದೆಂದು ನಿರ್ದಾರ ತೆಗೆದುಕೊಂಡೆವು. ಇದರ ಬಗ್ಗೆ ಈಗಾಗಲೇ ಅತ್ತೆಗೆ ತಿಳಿಸಿ ಫೆಬ್ರವರಿ ೧೦ರಿಂದ ಬೆಂಗಳೂರಿಗೆ ಬರಬೇಕೆಂದೂ ತಾಕಿತು ಮಾಡಿದೆವು. ಅವರು ಒಪ್ಪಿಕೊಂಡಿದ್ದು ಆಯಿತು. ಇದೀಗ ನಮ್ಮ ವೈದ್ಯೆಯ ಬಳಿ ಆಸ್ಪತ್ರೆಯ ಬಗ್ಗೆ ಮಾತನಾಡಿ, ಯಾವ ಆಸ್ಪತ್ರೆ ನಮಗೆ ಸೂಕ್ತ ಎಂದು ನಿರ್ದರಿಸಬೇಕೆಂದು ಆ ಬಗ್ಗೆ ವೈದ್ಯೆಯ ಬಳಿ ಮುಂದಿನ ತಿಂಗಳು ಪ್ರಸ್ಥಾಪಿಸಬೇಕೆಂದು ಅಂದು ಕೊಂಡಿದ್ದೇವೆ. ಇನ್ನೇನು ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿದ್ದೇವೆ. ಒಂದು ವಾರದ ರಜ ಇದೆ. ಮಗಳೂರಿನ ನಮ್ಮ ಮನೆಯಲ್ಲಿ ಕೆಲ ದಿನ, ಸಿದ್ದಾಪುರದಲ್ಲಿರುವ ಅವಳ ಮನೆಯಲ್ಲಿ ಕೆಲ ದಿನ ಇರಬೇಕೆಂದು ಅಂದು ಕೊಂಡಿದ್ದೆವು. ಆದರೆ ಮಂಗಳೂರಿನಿಂದ ಸಿದ್ದಾಪುರದ ಕಡೆ ಹೋಗುವ ರಸ್ತೆ ವಿಚಾರ ಕೇಳಿ ಈಗ ಮಂಗಳೂರಿಗೆ ಮಾತ್ರ ಹೋಗಿ ವಾಪಾಸಗುದಾಗಿ ಅಂದುಕೊಂಡಿದ್ದೇವೆ.
ಅಂದ ಹಾಗೆ ಮತ್ತೊಂದು ವಿಚಾರ ... ಇದೀಗ ಎರಡು ವಾರಗಳಿಂದ ನನ್ನ ಅಮ್ಮ -ಅಪ್ಪ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ಮಂತ್ರಾಲಯಕ್ಕೆ ಕರೆದು ಕೊಂಡು ಹೋಗಲೆಂದು ಅಕ್ಟೋಬರ್ ೧ಕ್ಕೆ ಟಿಕೆಟ್ ಬುಕ್ ಮಾಡುವುದಾಗಿ ಅಂದು ಕೊಂಡು ನೋಡಿದರೆ ಟ್ರೈನ್ ಟಿಕೆಟ್ ಸಿಗಲಿಲ್ಲ ಮತ್ತು ಬಸ್ ನಲ್ಲಿ ಕೊನೆಯ ಸಾಲಿನ ಟಿಕೆಟ್ ಇತ್ತು ಎಂದು ಅಕ್ಟೋಬರ್ ೯ಕ್ಕೆ ಟಿಕೆಟ್ ಬುಕ್ ಮಾಡಿದೆ. ಆದರೆ ಪ್ರಕ್ರತಿಯ ವಿಕೋಪಕ್ಕೆ ಮಂತ್ರಾಲಯ ಅಕ್ಟೋಬರ್ ೧ಕ್ಕೆ ಗುರಿಯಾಯಿತು. ಅಲ್ಲಿನ ಪರಿಸ್ಥಿತಿ ನೋಡಿ ಅಕ್ಟೋಬರ್ ೯ರ ಟಿಕೆಟ್ ಕ್ಯಾನ್ಸಲ್ ಮಾಡಿದೆ. ಅದೇ ನಾವೊಂದು ಕೊಂಡಿದ್ದೆ ಒಂದು ಆಗುವುದು ಇನ್ನೊಂದು. ನಮ್ಮಮ್ಮ ಹೇಳಿದ ಹಾಗೆ ಪುಣ್ಯ ಕ್ಷೇತ್ರಗಳಿಗೆ ಹೋಗಲು ಸಮಯ ಕೂಡಿ ಬರಬೇಕು, ನಾವಂದು ಬಗೆದರೆ ದೈವವೊಂದು ಬಗೆವುದು. ಈ ಸಂದರ್ಬದಲ್ಲಿ ಮನೆ , ಹೊಲ , ಜೀವ, ಆಸ್ತಿ ಕಳೆದುಕೊಂಡಿರೋ ಸಂತ್ರಸ್ಥರಿಗೆ ಆ ದೇವರು ಒಳ್ಳೇದು ಮಾಡಲಿ ಎಂದು ಆಶಿಸುತ್ತೇನೆ.