Friday, February 5, 2010
ಭೂಮಿ ಪೂಜೆ
ಮೊನ್ನೆ ಫೆಬ್ರವರಿ ೩ ನೇ ತಾರೀಕಿನಂದು ನಮ್ಮ ವಿಜಯ ಬ್ಯಾಂಕ್ ಕಾಲೋನಿ ಯಲ್ಲಿರವು ಸೈಟ್ ನಲ್ಲಿ ಭೂಮಿ ಪೂಜೆ ಮಾಡಿ ಮನೆ ಕಟ್ಟುವ ನಿರ್ದಾರಕ್ಕೆ ಶ್ರೀ ಗಣೇಶ ಹಾಡಿದೆವು. ಸುಮಾರು ೪ ತಿಂಗಳ ನಿರಂತರ (?) ಶ್ರಮದ ಬಳಿಕ ವರ್ಕಿಂಗ್ ಪ್ಲಾನ್ ಅಂತಿಮವಾಯ್ತು. ಈ ನಡುವೆ ಸುಮಾರು ೭ ರಿಂದ ೮ ಪ್ಲಾನ್ ನೋಡಿ ತಲೆ ಕೆಡಿಸುಕೊಂಡದ್ದು ಆಯಿತು. ಒಂದರಲ್ಲಿ ಏನೋ ಚಂದ ಮತ್ತೊಂದರಲ್ಲಿ ಇನ್ನೇನೋ ಚೆಂದ. ನನ್ನ ಮತ್ತು ನನ್ನಾಕೆಯ ನಡುವೆ ಸುಮಾರು ಚರ್ಚೆ ವಿಮರ್ಶೆಗಳ ಬಳಿಕ ಅಂತು ಇಂತು ಒಂದು ಪ್ಲಾನ್ ಅಂತಿಮವಾಯ್ತು. ಆದರೆ ಭೂಮಿ ಪೂಜೆ ದಿನ ಮನೆಯ ಹೊರಗಿನಿಂದ ಒಳಗೆ ಹೋಗುವ ಮೆಟ್ಟಿಲ ಸೈಜ್ ಜಾಸ್ತಿ ಮಾಡಿದರೆ ಒಳ್ಳೇದು ಅಂತ ಒಂದು ಸಜೆಶನ್ ಬಂತು. ಇರಲಿ ... ಎರೆಡೆರಡು ಬಾರಿ ಅಮ್ಮನ ಹತಿರ ಭೂಮಿ ಪೂಜೆಗೆ ದಿನ ಕೇಳೋದಿಕ್ಕೆ ಹೇಳಿ ಅಂತು ಇಂತು ಫೆಬ್ ೩ನೆ ತಾರೀಕಿನ ಬೆಳಗ್ಗೆ ೭ ಗಂಟೆಗೆ ಭೂಮಿ ಪೂಜೆ ಮಾಡಿದೆವು.

Subscribe to:
Posts (Atom)