ಹೌದು! ೪೦ ವಾರಗಳ ಈ ಒಂದು ಸುದೀರ್ಗ ಸುಮದುರ ಪ್ರಾಜೆಕ್ಟ್ ನಲ್ಲಿ ಈಗ ಹಾಫ್ ಟೈಮ್ , ಇದು ಇಪತ್ತನೆ ವಾರ. ಈ ತನಕ ಸುಮಾರು ಬದಲಾವಣೆಗಳು ಆಗಿವೆ. ಇದೀಗ ನಾವು ಸೀಮಂಥದ ಬಗ್ಗೆ ಯೋಚನೆ ಮಾಡುತ್ತ ಇದ್ದೇವೆ. ಈ ಮೊದಲು ಜನವರಿ ಇಂದ ಇವಳು ಮಂಗಳೂರಿನ ನಮ್ಮ ಮನೆಯಲ್ಲಿ ಇದ್ದು, ಮನೆಯಿಂದ ಒಂದು ತಿಂಗಳು ಕೆಲಸ ಮಾಡುವುದೆಂದು ನಿರ್ದರಿಸಿದ್ದೆವು. ಆದರೆ ಒಂದೆರಡು ವಾರದೀಚೆಗೆ ಇದು ಅಷ್ಟೊಂದು ಉತ್ತಮ ಅಲ್ಲವೆಂದು, ಇಲ್ಲಿ ಬೆಂಗಳೂರಿನಲ್ಲೇ ಡೆಲಿವರಿ ಮಾಡಿಸ್ಕೊಂಡ ನಂತರ ಇವಳು ಮನಗೆ ಹೋಗುವುದೆಂದು ನಿರ್ದಾರ ತೆಗೆದುಕೊಂಡೆವು. ಇದರ ಬಗ್ಗೆ ಈಗಾಗಲೇ ಅತ್ತೆಗೆ ತಿಳಿಸಿ ಫೆಬ್ರವರಿ ೧೦ರಿಂದ ಬೆಂಗಳೂರಿಗೆ ಬರಬೇಕೆಂದೂ ತಾಕಿತು ಮಾಡಿದೆವು. ಅವರು ಒಪ್ಪಿಕೊಂಡಿದ್ದು ಆಯಿತು. ಇದೀಗ ನಮ್ಮ ವೈದ್ಯೆಯ ಬಳಿ ಆಸ್ಪತ್ರೆಯ ಬಗ್ಗೆ ಮಾತನಾಡಿ, ಯಾವ ಆಸ್ಪತ್ರೆ ನಮಗೆ ಸೂಕ್ತ ಎಂದು ನಿರ್ದರಿಸಬೇಕೆಂದು ಆ ಬಗ್ಗೆ ವೈದ್ಯೆಯ ಬಳಿ ಮುಂದಿನ ತಿಂಗಳು ಪ್ರಸ್ಥಾಪಿಸಬೇಕೆಂದು ಅಂದು ಕೊಂಡಿದ್ದೇವೆ. ಇನ್ನೇನು ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿದ್ದೇವೆ. ಒಂದು ವಾರದ ರಜ ಇದೆ. ಮಗಳೂರಿನ ನಮ್ಮ ಮನೆಯಲ್ಲಿ ಕೆಲ ದಿನ, ಸಿದ್ದಾಪುರದಲ್ಲಿರುವ ಅವಳ ಮನೆಯಲ್ಲಿ ಕೆಲ ದಿನ ಇರಬೇಕೆಂದು ಅಂದು ಕೊಂಡಿದ್ದೆವು. ಆದರೆ ಮಂಗಳೂರಿನಿಂದ ಸಿದ್ದಾಪುರದ ಕಡೆ ಹೋಗುವ ರಸ್ತೆ ವಿಚಾರ ಕೇಳಿ ಈಗ ಮಂಗಳೂರಿಗೆ ಮಾತ್ರ ಹೋಗಿ ವಾಪಾಸಗುದಾಗಿ ಅಂದುಕೊಂಡಿದ್ದೇವೆ.
ಅಂದ ಹಾಗೆ ಮತ್ತೊಂದು ವಿಚಾರ ... ಇದೀಗ ಎರಡು ವಾರಗಳಿಂದ ನನ್ನ ಅಮ್ಮ -ಅಪ್ಪ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ಮಂತ್ರಾಲಯಕ್ಕೆ ಕರೆದು ಕೊಂಡು ಹೋಗಲೆಂದು ಅಕ್ಟೋಬರ್ ೧ಕ್ಕೆ ಟಿಕೆಟ್ ಬುಕ್ ಮಾಡುವುದಾಗಿ ಅಂದು ಕೊಂಡು ನೋಡಿದರೆ ಟ್ರೈನ್ ಟಿಕೆಟ್ ಸಿಗಲಿಲ್ಲ ಮತ್ತು ಬಸ್ ನಲ್ಲಿ ಕೊನೆಯ ಸಾಲಿನ ಟಿಕೆಟ್ ಇತ್ತು ಎಂದು ಅಕ್ಟೋಬರ್ ೯ಕ್ಕೆ ಟಿಕೆಟ್ ಬುಕ್ ಮಾಡಿದೆ. ಆದರೆ ಪ್ರಕ್ರತಿಯ ವಿಕೋಪಕ್ಕೆ ಮಂತ್ರಾಲಯ ಅಕ್ಟೋಬರ್ ೧ಕ್ಕೆ ಗುರಿಯಾಯಿತು. ಅಲ್ಲಿನ ಪರಿಸ್ಥಿತಿ ನೋಡಿ ಅಕ್ಟೋಬರ್ ೯ರ ಟಿಕೆಟ್ ಕ್ಯಾನ್ಸಲ್ ಮಾಡಿದೆ. ಅದೇ ನಾವೊಂದು ಕೊಂಡಿದ್ದೆ ಒಂದು ಆಗುವುದು ಇನ್ನೊಂದು. ನಮ್ಮಮ್ಮ ಹೇಳಿದ ಹಾಗೆ ಪುಣ್ಯ ಕ್ಷೇತ್ರಗಳಿಗೆ ಹೋಗಲು ಸಮಯ ಕೂಡಿ ಬರಬೇಕು, ನಾವಂದು ಬಗೆದರೆ ದೈವವೊಂದು ಬಗೆವುದು. ಈ ಸಂದರ್ಬದಲ್ಲಿ ಮನೆ , ಹೊಲ , ಜೀವ, ಆಸ್ತಿ ಕಳೆದುಕೊಂಡಿರೋ ಸಂತ್ರಸ್ಥರಿಗೆ ಆ ದೇವರು ಒಳ್ಳೇದು ಮಾಡಲಿ ಎಂದು ಆಶಿಸುತ್ತೇನೆ.
Monday, October 5, 2009
Sunday, September 20, 2009
ಮನೆ ಕಟ್ಟಿ ನೋಡು / ಅಪಾರ್ಟ್ಮೆಂಟ್ ಹುಡುಕಿ ನೋಡು !
ಮನೆ ಕಟ್ಟಿ ನೋಡು ಮದ್ವೆ ಮಾಡಿ ನೋಡು ಅಂಥ ಹಿರಿಯರು ಸುಮ್ನೆ ಹೇಳಿಲ್ಲ ..
ಹತ್ತಾರು ವಾರಗಳಿಂದ ದಿನ ಪತ್ರಿಕೆ, ಅಂತರ್ಜಾಲ ಇಲ್ಲಾ ಯಾರೋ ಹೇಳಿದ್ರು ಅಂಥ ಶನಿವಾರ ಭಾನುವಾರ ಅಲೆದಿದ್ದೆ ಅಲೆದಿದ್ದು ..
ಯಾಕೆ ಅಂದ್ರೆ ಅಪಾರ್ಟ್ಮೆಂಟ್ ಹುಡ್ಕಿಕೊಂಡು. ಹೌದು ಇನ್ನೇನು ಬೆಂಗಳೊರಿನಲ್ಲಿ ಕಾಯಂ ಆಗಿ ಇರ್ಬೇಕು ಅಂಥ ಆದ್ಮೇಲೆ ತಲೆ ಮೇಲೆ ಒಂದು ಸೂರು ಬೇಕು ಅಂಥ ವಾರ ಪೂರ್ತಿ ಮಾಹಿತಿ ಸಂಗ್ರಹ ಮಾಡ್ಕೊಂಡು, ರಜ ಬರ್ತಿದ್ದ ಹಂಗೆ ಹೊರಡುತಿದ್ವಿ. ಪೂರ್ವಬವಿಯಾಗಿ ಒಂದು ಬಾಟಲ್ ನಲ್ಲಿ ನೀರು ಮತ್ತೆ ಏನೋ ಒಂದು ತಿನ್ನೋದಿಕ್ಕೆ ತಗೊಂಡು, ಪೇಪರ್ ಪೆನ್ ಹಿಡ್ಕೊಂಡು ಪ್ಲಾನ್ ಹಾಕ್ತಾ ಹೊರಡೋದು. ಯಾವುದೊ ಒಂದು ಪಿಕ್ನಿಕ್ ಗೆ ಹೋದ ಹಾಗೆ. ಅದು ಬೇರೆ ರಿಸೆಸನ್, ರಿಯಲ್ ಎಸ್ಟೇಟ್ ಎಲ್ಲ ಡೌನ್ ಆಗಿದೆ ಅಂಥ ಪೇಪರ್ ನಲ್ಲಿ ನ್ಯೂಸ್ ಬೇರೆ. ಇದೆ ಸರಿಯಾದ ಸಮಯ ಅಂಥ ನಾವು ಜಾಣರಾಗಬೇಕು ಅಂಥ ಅಂದುಕೊಂಡ್ವಿ. ಪೂರ್ವ, ದಕ್ಷಿಣ ಅಂಥ ಸುಮಾರು ಪ್ರಾಜೆಕ್ಟ್ಸ್ ನೋಡಿದ್ವಿ. ಕೆಲವು ಲೊಕೇಶನ್ ಚೆನ್ನಾಗಿಲ್ಲ, ಇನ್ನು ಕೆಲವು ಪ್ಲಾನ್ ಚೆನ್ನಾಗಿಲ್ಲ, ಇನ್ನು ಕೆಲವು ಓಪನ್ ಜಾಗ ಇಲ್ಲಾ ಅದು ಇದು ಅಂಥ ಸುಮಾರಾಗಿ ರಿಜೆಕ್ಟ್ ಆಗ್ತಾ ಇತು. ಇನ್ನ ಯಾವುದು ಇಷ್ಟ ಆಯ್ತೋ ಅದಂತೂ ಹತ್ತಿರ ಹೋಗದಷ್ಟು ದುಬಾರಿ. ಸಾಲ ತಗೊಂಡು ಇನ್ನು ೨೦-೨೫ ವರ್ಷ ಪಾವತಿ ಮಾಡಬೇಕಾಗಬಹುದು. ಯಾವುದು ಇಷ್ಟನೆ ಆಗಿಲ್ಲ ಅಂಥ ಇಲ್ಲಾ, ಕೆಲವೊಂದು ಇಷ್ಟನು ಆಯಿತು , ಸುಮಾರಾಗಿ ಬಜೆಟ್ ನಲ್ಲೂ ಇತು, ಆದ್ರೆ ಅಲ್ಲಿ ಹೋಗ ಬರೋದೇ ದೊಡ್ಡ ಕಷ್ಟ. ಇನ್ನು ಕೆಲವು ಬಜೆಟ್ ಗಿಂತ ಸ್ವಲ್ಪ ಜಾಸ್ತಿನೆ ಆದರು, ಚೆನ್ನಾಗಿರೋ ಪ್ರಾಜೆಕ್ಟ್ಸ್ ಇದ್ವು. ಆದ್ರೆ ಒಳಗಡೆ ಮರದ ಕೆಲಸ ಮಾಡಿ ಮುಗ್ಸೋಕೆ ಕಷ್ಟ ಆಗಬಹುದೋ ಏನೋ ಅಂಥ ಅನ್ನಿಸ್ತು. ಇನ್ನೇನು ಮಾಡೋದು ಅಂಥ ನಮ್ಮ ಬನ್ನೇರುಘಟ್ಟ ರಸ್ತೆ ನಲ್ಲಿ ಇರೋ ನಿವೇಶನದಲ್ಲಿ ಮನೆ ಕಟ್ಸೋದು ಉತ್ತಮ ಅಂಥ ನಿರ್ದಾರ ತಗೊಂಡ್ವಿ. ಅಲ್ಲಿಗೆ ಅಪಾರ್ಟ್ಮೆಂಟ್ ಹುಡುಕೋ ಪ್ರಯತ್ನಕ್ಕೆ ಕ್ರಿಶ್ನಾರ್ಪಣೆ ಬಿಟ್ಟು ಮನೆ ಕಟ್ಟೋ ಕೆಲಸಕ್ಕೆ ಶ್ರೀ ಗಣೇಶ ಹಾಡಿದ್ವಿ.

Monday, September 7, 2009
ಲೈಫ್ ನಲ್ಲಿ ಪ್ರಥಮ ಆದ್ಯತೆ ಯಾರಿಗೆ? ಹೆಂಡತಿನ ಇಲ್ಲ ಮಗೂನ?
ಇಂಥ ಒಂದು ಪ್ರಶ್ನೆ ನನ್ನ ಮುಂದೆ ಬಂದಾಗ ಇನ್ನು ಸಂಬ್ರಮದ ಮುಡ್ ನಲ್ಲಿ ಇದ್ದ ನಾನು ಒಂದಿಷ್ಟುತದ ಮಾಡದೇನೆ ಮಗು ಅಂದ್ಬಿಟ್ಟೆ. ಆ ಸಂದರ್ಭ ದಲ್ಲಿ ನನಗೆ ಸಿಕ್ಕ ಉತ್ತರ ಮೌನ. ಆದರೆ ಸಾಮಾನ್ಯ ಪ್ರಶ್ನೆ ಯಂತೆ ಕಂಡು ಬಂದರೂ ಆಲೋಚಿಸಿದಾಗ ಇದಕ್ಕೆ ಕೊಟ್ಟ ಉತ್ತರ ತಪ್ಪೇ ಎಂಬ ಭಾವನೆ ಕಾಡಿತು.
ಸಾಮನ್ಯವಾಗಿ ಹೆತ್ತವರು ಪ್ರೀತಿ ಮುದ್ದಿನಿಂದ ತಮ್ಮ ಮಕ್ಕಳನ್ನು ಬೆಳೆಸಿ, ಕೊನೆಗೊಂದು ದಿನ ಮಕ್ಕಳೋ ಎಜುಕೇಶನ್, ಜಾಬ್, ಮದ್ವೆ ಅಂಥ ತಮ್ಮ ತಮ್ಮ ದಾರಿ ನೋಡ್ಕೊಂಡು ಹೋಗ್ತಾರೆ. ಇದು ಅಗತ್ಯ ಕೂಡ. ನಾವಿರುವ ಊರಲ್ಲಿ ಅವಕಾಶ ಅಥವಾ ಆವಶ್ಯಕ ಪೂರೈಕೆ ಗಳ ಕೊರತೆ ಇಂದ ಇಂಥ ವಲಸೆ ಬರುವುದು ಆಗತ್ಯವಾಗುತ್ತದೆಇಂಥ ಸಂದರ್ಬದಲ್ಲಿ ಮುಪ್ಪಿನ ಹೊಸ್ತಿಲಲ್ಲಿ ನಿಂತ ಹೆತ್ತವರಿಗೆ ಒಬ್ಬರಿಗೊಬ್ಬರು ಜೊತೆ ಆಗ್ತಾರೆ. ಮಕ್ಕಳೋ .. ಇಂದು ಬರ್ತಾರೆ ನಾಳೆ ಬೆಳಿತಾರೆ ನಾಡಿದ್ದು ತಮ್ಮ ತಮ್ಮ ದಾರಿ ನೋಡ್ಕೊಂಡು ಹೋಗ್ತಾರೆ. ಆದರೆ ಗಂಡ ಹೆಂಡತಿ ಸಂಬಂಧದಲ್ಲಿ ಈ ಥರದ ಬೆಳವಣಿಗೆಗಳಿಗೆ ಅವಕಾಶಗಳಿಲ್ಲ. ಅದ್ದರಿಂದ ಹೆಂಡತಿ ಗಂಡನಿಗೆ ಮತ್ತು ಗಂಡ ಹೆಂಡತಿಗೆ ಪ್ರಥಮ ಅದ್ಯತೆ ನೀಡುವುದು ಸಮಂಜಸ ಹಾಗು ಕರ್ತವ್ಯ ಕೂಡ.

Tuesday, August 18, 2009
ಸಂತೋಷದ ಸುದ್ದಿ
ಇತ್ತೀಚಿನ ಕೆಲ ದಿನಗಳಿಂದ ಮನಸಲ್ಲಿ ಸಂಭ್ರಮ ಯಾಕೆ ಅಂಥ ಪ್ರಶ್ನೆ ಹಾಕಿದರೆ ಬಹುಶ... ನನ್ನ ಸ್ಥಾನದಲ್ಲಿ ಯಾರೇ ಇದ್ರೂ ಇದೇ ಥರ ಸಂತಸ ಸಂಭ್ರಮ ವ್ಯಕ್ತ ಪಡಿಸ್ಥಾರೋ ಏನೋ. ಸಾಮನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಬರುವಂಥ ವಿಶೇಷ ವಿಷ್ಯ ....
ಇನ್ನು ಕೆಲವೇ ತಿಂಗಳಲ್ಲಿ ನಮ್ಮ ನಡುವೆ ಒಬ್ಬ ಹೊಸ ಸದಸ್ಯ ಎಂಟ್ರಿ ಮಾಡ್ತಾ ಇದ್ದಾನೆ(ಳೆ). ಹೌದು ನಮ್ಮ ಪುಟ್ಟ ಕೂಸಿಗಾಗಿ ಇನ್ನು ೬ ತಿಂಗಳು ಕಾಯಬೇಕಷ್ಟೇ.

Monday, July 20, 2009
ಮನದ ಪುಟಗಳಿಂದ
ನನ್ನ ಮನದನಿಸಿಕೆಗಳನ್ನು ವ್ಯಕ್ತ ಪಡಿಸುವ ಆಶಯದಿಂದ ಈಗಾಗಲೇ ಲೈವ್ ಜರ್ನಲ್ ನಲ್ಲಿ ಕೆಲವೊಂದು ಸಣ್ಣಪುಟ್ಟ ಪೋಸ್ಟ್ ಬ್ಲಾಗ್ ಮಾಡಿದ್ದರು ಅದ್ಯಾಕೋ ತೃಪ್ತಿ ಇರಲ್ಲಿಲ್ಲ. ಕನ್ನಡದಲ್ಲಿ ಮನದನಿಸಿಕೆಗಳನ್ನು ಬರೆಯಬೇಕೆನ್ನುವ ಆಸೆ ನನಗೆ ಉಂಟಾಗಿರುವುದೇ ಈ ಹೊಸ ಬ್ಲಾಗ್ ನ ಉದಯಕ್ಕೆ ಕಾರಣ. ಹಾಗೆಂದ ಮಾತ್ರಕ್ಕೆ ನಾನೇನೋ ಕನ್ನಡ ಬರವಣಿಗೆಯ ಅನುಭವಿ ಅಲ್ಲ. ಹೀಗೆ ಸುಮ್ಮನೆ ಮನದ ಭಾವನೆಗಳನ್ನು ನಾನು ವಿದಿ ಇಲ್ಲದೆ ಅಳವಡಿಸಿಕೊಂಡಂಥ ಆಂಗ್ಲ ಬಾಷೆ ಗಿಂತ ನಾನು ಓದಿ ಮೆಚ್ಹಿದ ಕನ್ನಡದಲ್ಲಿ ಬರೆದರೆ ಉತ್ತಮ ಎಂದು ಇದೋ ಈ ಪ್ರಯತ್ನ.. ಅಂತು ಬ್ಲಾಗ್ ಶುರು ಆಗಿದೆ ಇನ್ನು ಇದನ್ನು ಜೀವಂತ ವಾಗಿ ಇದಬೇಕಷ್ಟೇ...
Subscribe to:
Posts (Atom)