ಮನೆ ಕಟ್ಟಿ ನೋಡು ಮದ್ವೆ ಮಾಡಿ ನೋಡು ಅಂಥ ಹಿರಿಯರು ಸುಮ್ನೆ ಹೇಳಿಲ್ಲ ..
ಹತ್ತಾರು ವಾರಗಳಿಂದ ದಿನ ಪತ್ರಿಕೆ, ಅಂತರ್ಜಾಲ ಇಲ್ಲಾ ಯಾರೋ ಹೇಳಿದ್ರು ಅಂಥ ಶನಿವಾರ ಭಾನುವಾರ ಅಲೆದಿದ್ದೆ ಅಲೆದಿದ್ದು ..
ಯಾಕೆ ಅಂದ್ರೆ ಅಪಾರ್ಟ್ಮೆಂಟ್ ಹುಡ್ಕಿಕೊಂಡು. ಹೌದು ಇನ್ನೇನು ಬೆಂಗಳೊರಿನಲ್ಲಿ ಕಾಯಂ ಆಗಿ ಇರ್ಬೇಕು ಅಂಥ ಆದ್ಮೇಲೆ ತಲೆ ಮೇಲೆ ಒಂದು ಸೂರು ಬೇಕು ಅಂಥ ವಾರ ಪೂರ್ತಿ ಮಾಹಿತಿ ಸಂಗ್ರಹ ಮಾಡ್ಕೊಂಡು, ರಜ ಬರ್ತಿದ್ದ ಹಂಗೆ ಹೊರಡುತಿದ್ವಿ. ಪೂರ್ವಬವಿಯಾಗಿ ಒಂದು ಬಾಟಲ್ ನಲ್ಲಿ ನೀರು ಮತ್ತೆ ಏನೋ ಒಂದು ತಿನ್ನೋದಿಕ್ಕೆ ತಗೊಂಡು, ಪೇಪರ್ ಪೆನ್ ಹಿಡ್ಕೊಂಡು ಪ್ಲಾನ್ ಹಾಕ್ತಾ ಹೊರಡೋದು. ಯಾವುದೊ ಒಂದು ಪಿಕ್ನಿಕ್ ಗೆ ಹೋದ ಹಾಗೆ. ಅದು ಬೇರೆ ರಿಸೆಸನ್, ರಿಯಲ್ ಎಸ್ಟೇಟ್ ಎಲ್ಲ ಡೌನ್ ಆಗಿದೆ ಅಂಥ ಪೇಪರ್ ನಲ್ಲಿ ನ್ಯೂಸ್ ಬೇರೆ. ಇದೆ ಸರಿಯಾದ ಸಮಯ ಅಂಥ ನಾವು ಜಾಣರಾಗಬೇಕು ಅಂಥ ಅಂದುಕೊಂಡ್ವಿ. ಪೂರ್ವ, ದಕ್ಷಿಣ ಅಂಥ ಸುಮಾರು ಪ್ರಾಜೆಕ್ಟ್ಸ್ ನೋಡಿದ್ವಿ. ಕೆಲವು ಲೊಕೇಶನ್ ಚೆನ್ನಾಗಿಲ್ಲ, ಇನ್ನು ಕೆಲವು ಪ್ಲಾನ್ ಚೆನ್ನಾಗಿಲ್ಲ, ಇನ್ನು ಕೆಲವು ಓಪನ್ ಜಾಗ ಇಲ್ಲಾ ಅದು ಇದು ಅಂಥ ಸುಮಾರಾಗಿ ರಿಜೆಕ್ಟ್ ಆಗ್ತಾ ಇತು. ಇನ್ನ ಯಾವುದು ಇಷ್ಟ ಆಯ್ತೋ ಅದಂತೂ ಹತ್ತಿರ ಹೋಗದಷ್ಟು ದುಬಾರಿ. ಸಾಲ ತಗೊಂಡು ಇನ್ನು ೨೦-೨೫ ವರ್ಷ ಪಾವತಿ ಮಾಡಬೇಕಾಗಬಹುದು. ಯಾವುದು ಇಷ್ಟನೆ ಆಗಿಲ್ಲ ಅಂಥ ಇಲ್ಲಾ, ಕೆಲವೊಂದು ಇಷ್ಟನು ಆಯಿತು , ಸುಮಾರಾಗಿ ಬಜೆಟ್ ನಲ್ಲೂ ಇತು, ಆದ್ರೆ ಅಲ್ಲಿ ಹೋಗ ಬರೋದೇ ದೊಡ್ಡ ಕಷ್ಟ. ಇನ್ನು ಕೆಲವು ಬಜೆಟ್ ಗಿಂತ ಸ್ವಲ್ಪ ಜಾಸ್ತಿನೆ ಆದರು, ಚೆನ್ನಾಗಿರೋ ಪ್ರಾಜೆಕ್ಟ್ಸ್ ಇದ್ವು. ಆದ್ರೆ ಒಳಗಡೆ ಮರದ ಕೆಲಸ ಮಾಡಿ ಮುಗ್ಸೋಕೆ ಕಷ್ಟ ಆಗಬಹುದೋ ಏನೋ ಅಂಥ ಅನ್ನಿಸ್ತು. ಇನ್ನೇನು ಮಾಡೋದು ಅಂಥ ನಮ್ಮ ಬನ್ನೇರುಘಟ್ಟ ರಸ್ತೆ ನಲ್ಲಿ ಇರೋ ನಿವೇಶನದಲ್ಲಿ ಮನೆ ಕಟ್ಸೋದು ಉತ್ತಮ ಅಂಥ ನಿರ್ದಾರ ತಗೊಂಡ್ವಿ. ಅಲ್ಲಿಗೆ ಅಪಾರ್ಟ್ಮೆಂಟ್ ಹುಡುಕೋ ಪ್ರಯತ್ನಕ್ಕೆ ಕ್ರಿಶ್ನಾರ್ಪಣೆ ಬಿಟ್ಟು ಮನೆ ಕಟ್ಟೋ ಕೆಲಸಕ್ಕೆ ಶ್ರೀ ಗಣೇಶ ಹಾಡಿದ್ವಿ.
Sunday, September 20, 2009
Subscribe to:
Post Comments (Atom)
No comments:
Post a Comment