ಲೈಫ್ ನಲ್ಲಿ ಪ್ರಥಮ ಆದ್ಯತೆ ಯಾರಿಗೆ? ಹೆಂಡತಿನ ಇಲ್ಲ ಮಗೂನ?
ಇಂಥ ಒಂದು ಪ್ರಶ್ನೆ ನನ್ನ ಮುಂದೆ ಬಂದಾಗ ಇನ್ನು ಸಂಬ್ರಮದ ಮುಡ್ ನಲ್ಲಿ ಇದ್ದ ನಾನು ಒಂದಿಷ್ಟುತದ ಮಾಡದೇನೆ ಮಗು ಅಂದ್ಬಿಟ್ಟೆ. ಆ ಸಂದರ್ಭ ದಲ್ಲಿ ನನಗೆ ಸಿಕ್ಕ ಉತ್ತರ ಮೌನ. ಆದರೆ ಸಾಮಾನ್ಯ ಪ್ರಶ್ನೆ ಯಂತೆ ಕಂಡು ಬಂದರೂ ಆಲೋಚಿಸಿದಾಗ ಇದಕ್ಕೆ ಕೊಟ್ಟ ಉತ್ತರ ತಪ್ಪೇ ಎಂಬ ಭಾವನೆ ಕಾಡಿತು.
ಸಾಮನ್ಯವಾಗಿ ಹೆತ್ತವರು ಪ್ರೀತಿ ಮುದ್ದಿನಿಂದ ತಮ್ಮ ಮಕ್ಕಳನ್ನು ಬೆಳೆಸಿ, ಕೊನೆಗೊಂದು ದಿನ ಮಕ್ಕಳೋ ಎಜುಕೇಶನ್, ಜಾಬ್, ಮದ್ವೆ ಅಂಥ ತಮ್ಮ ತಮ್ಮ ದಾರಿ ನೋಡ್ಕೊಂಡು ಹೋಗ್ತಾರೆ. ಇದು ಅಗತ್ಯ ಕೂಡ. ನಾವಿರುವ ಊರಲ್ಲಿ ಅವಕಾಶ ಅಥವಾ ಆವಶ್ಯಕ ಪೂರೈಕೆ ಗಳ ಕೊರತೆ ಇಂದ ಇಂಥ ವಲಸೆ ಬರುವುದು ಆಗತ್ಯವಾಗುತ್ತದೆಇಂಥ ಸಂದರ್ಬದಲ್ಲಿ ಮುಪ್ಪಿನ ಹೊಸ್ತಿಲಲ್ಲಿ ನಿಂತ ಹೆತ್ತವರಿಗೆ ಒಬ್ಬರಿಗೊಬ್ಬರು ಜೊತೆ ಆಗ್ತಾರೆ. ಮಕ್ಕಳೋ .. ಇಂದು ಬರ್ತಾರೆ ನಾಳೆ ಬೆಳಿತಾರೆ ನಾಡಿದ್ದು ತಮ್ಮ ತಮ್ಮ ದಾರಿ ನೋಡ್ಕೊಂಡು ಹೋಗ್ತಾರೆ. ಆದರೆ ಗಂಡ ಹೆಂಡತಿ ಸಂಬಂಧದಲ್ಲಿ ಈ ಥರದ ಬೆಳವಣಿಗೆಗಳಿಗೆ ಅವಕಾಶಗಳಿಲ್ಲ. ಅದ್ದರಿಂದ ಹೆಂಡತಿ ಗಂಡನಿಗೆ ಮತ್ತು ಗಂಡ ಹೆಂಡತಿಗೆ ಪ್ರಥಮ ಅದ್ಯತೆ ನೀಡುವುದು ಸಮಂಜಸ ಹಾಗು ಕರ್ತವ್ಯ ಕೂಡ.
Monday, September 7, 2009
Subscribe to:
Post Comments (Atom)
No comments:
Post a Comment